ಹೌದು, ನಯನತಾರಾ ನಟನೆಯ 75ನೇ ಸಿನಿಮಾವಾಗಿರುವ ‘ಅನ್ನಪೂರ್ಣಿ’ಯನ್ನು ನಿಲೇಶ್ ಕೃಷ್ಣ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಾಯಕಿಯಾದ ನಟಿ ನಯನತಾರಾ, ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುತ್ತಾಳೆ. ಆದರೆ ಆಕೆ ಮುಸ್ಲಿಂ ಸಂಪ್ರದಾಯದಂತೆ ಹಿಜಾಬ್ ಧರಿಸಿ ನಮಾಜ್ ಮಾಡಿ, ಮಾಂಸಹಾರ ಅಡುಗೆ ಮಾಡುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಹೀರೋ ಮುಸ್ಲಿಂ ಸಮುದಾಯದವನಾಗಿದ್ದು, ಸಿನಿಮಾದ ಒಂದು ದೃಶ್ಯದಲ್ಲಿ ಶ್ರೀರಾಮನು ಪ್ರಾಣಿ ಬೇಟೆಯಾಡಿ, ಅದರ ಮಾಂಸವನ್ನು ಸೇವನೆ ಮಾಡುತ್ತಿದ್ದನು ಎಂದು ನಾಯಕ ನಾಯಕಿಗೆ ಹೇಳುವ ದೃಶ್ಯವಿದೆ. ಇದು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವಂತಿದೆ. ಹಾಗೂ ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂಬ ಆರೋಪಗಳು ‘ಅನ್ನಪೂರ್ಣಿ’ ಸಿನಿಮಾದ ಬಗ್ಗೆ ಕೇಳಿಬಂದಿದ್ದವು
Discussion about this post