ಮಹಿಳಾ ಪ್ರೀಮಿಯರ್ ಲೀಗ್ 2024 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಗಳಿಸಿ ಮೊಟ್ಟಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಭಾನುವಾರ ದೆಹಲಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹಿಳೆಯರ ಫೈನಲ್ನಲ್ಲಿ ಎದುರಾಳಿ ತಂಡವನ್ನು ಎಂಟು ವಿಕೆಟ್ಗಳಿಂದ ಬಗ್ಗುಬಡಿದು ಕಪ್ ತನ್ನದಾಗಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡವನ್ನು ಆರ್ಸಿಬಿ ಕೇವಲ 113 ರನ್ಗಳಿಗೆ ಆಲೌಟ್ ಮಾಡಿತ್ತು. ಇನ್ನು ಈ ಲಕ್ಷ್ಯವನ್ನು ಚೇಸ್ ಮಾಡಿದ RCB ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ 19.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115ರನ್ ಬಾರಿಸಿ ವಿಜಯಪತಾಕೆಯನ್ನು ಹಾರಿಸಿದರು. ಆರ್ಸಿಬಿ ಪರ ರಿಚಾ ಘೋಷ್ 17, ಎಲ್ಲಿಸ್ ಪೆರ್ರಿ 35, ಸೋಫಿ ಡಿವೈನ್ 32 ಮತ್ತು ತಂಡದ ನಾಯಕಿ ಸ್ಮೃತಿ ಮಂಧಾನ ರವರ 31 ರನ್ಗಳ ಕೊಡುಗೆಯಿಂದ ಭರ್ಜರಿ ಜಯ ಗಳಿಸಿ ಕೋಟ್ಯಾಂತರ ಆರ್ಸಿಬಿ ಅಭಿಮಾನಿಗಳ ಕನಸನ್ನು ನನಸು ಮಾಡಿದರು.
Discussion about this post