ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಬ್ ಶೆಟ್ಟಿ, ನಿನ್ನೆಯ ಅಮೆಜಾನ್ ಪ್ರೈಂ ವಿಡಿಯೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಸೌತ್ & ನಾರ್ತ್ ಇಂಡಿಯಾ ಸಮಾಗಮಕ್ಕೆ ಸಾಕ್ಷಿಯಂತೆ ಇದ್ದ ಈ ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತನ್ನೂ ಹಂಚಿಕೊಂಡರು. ನಟ ವರುಣ್ ಧವನ್ ಜೊತೆ ವೇದಿಕೆಯನ್ನೇರಿದ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತು ಆರಂಭಿಸಿದರು. ಕಾಂತಾರ ಕಥೆ ಇಂದು ನಿನ್ನೆ ಹುಟ್ಟಿದ್ದಲ್ಲ, ಅನೇಕ ವರ್ಷಗಳಿಂದ ಎದೆಯಲ್ಲಿ ಇಟ್ಟುಕೊಂಡಂಥ ಕಥೆ. ಆ ನಂತರ ಯಕ್ಷಗಾನದಿಂದಲೇ ನಟನೆಗಿಳಿದಿದ್ದಾಗಿ ರಿಷಬ್ ಹೇಳಿದರು. ಮೊದಲಿಂದಲೂ ನಮ್ಮ ಊರಿನ ಜನಪದ ಕತೆಗಳನ್ನು ಹೇಳುವ ಹಂಬಲ ನನ್ನಲ್ಲಿ ಇತ್ತು ಎಂದು ರಿಷಬ್ ಶೆಟ್ಟಿ ಹೇಳಿದರು.
Discussion about this post