ದೇಶದ ನಾನಾ ಭಾಗಗಳಲ್ಲಿ ಅಪಾರ ಮಳೆ ಕೊರತೆ ಕಾರಣ ಜನರು ಭೀಕರ ಬರಗಾಲದಿಂದ ಬೇಸತ್ತು ಹೋಗಿದ್ದಾರೆ. ಹಾಗೆಯೇ ಮತ್ತೊಂದೆಡೆ ಈಗಾಗಲೇ ಪ್ರಮುಖ ಜಲಾಶಯಗಳಲ್ಲೂ ಕೂಡ ನೀರು ಅತ್ಯಂತ ತಳ ಹಂತವನ್ನು ತಲುಪಿದೆ. ಅಲ್ಲದೇ ಕುಡಿಯುವ ನೀರಿಗೂ ಭಾರೀ ಹಾಹಾಕಾರ ಶುರುವಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಂತೂ ನೀರಿಗೆ ಬರಬಂದಂತಾಗಿದೆ. ಇನ್ನು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬೆಂಗಳೂರಿನ ನಮ್ಮ ಮೆಟ್ರೋದ ಒಂದು ರೈಲನ್ನು ಸ್ವಚ್ಛಗೊಳಿಸಲು ಸರಿಸುಮಾರು 6,200 ಲೀಟರ್ ನೀರು ಬೇಕಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಬೆಂಗಳೂರಿಗರು ಶಾಕ್ ಆಗಿದ್ದಾರೆ. ಇಂತಹ ಸಮಯದಲ್ಲಿ ಇಷ್ಟೊಂದು ನೀರಿನ ದುಂದುವೆಚ್ಚ ಬೇಕಾ ಅಂತ ಬೆಂಗಳೂರಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚುನಾವಣೆ ನಂತರ ಬಿವೈ ವಿಜಯೇಂದ್ರ ಪಟ್ಟ ಕಳ್ಕೋಳ್ತಾರೆ!
ಬಿ.ವೈ ವಿಜಯೇಂದ್ರ ಅವರು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ತಮ್ಮ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ....
Discussion about this post