ರಾಜ್ಯದೆಲ್ಲೆಡೆ ಬಿರು ಬೀಸಿಲು ತನ್ನ ಅಬ್ಬರ ಜೋರಾಗಿಸಿದೆ. ಬೀಸಿಲಿನ ಧಗೆ ಒಂದು ಕಡೆ ಆದರೆ ನೀರಿನ ಕೊರತೆ ಇನ್ನೊಂದು ಕಡೆ. ಸದ್ಯ ಬೆಂಗಳೂರಿನಲ್ಲಿ ನೀರಿನ ಪರಿಸ್ಥಿತಿಯ ಬಗ್ಗೆ ಹೇಳಲೇಬೇಕಿಲ್ಲ. ನೀರಿನ ಕೊರತೆ ಎಷ್ಟರಮಟ್ಟಿಗೆ ಇದೆ ಎಂದು ನೋಡ್ತಾನೆ ಇದಿವಿ. ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಹೇಗೆ ಎನ್ನುವ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಒಂದು ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಬೇಸಿಗೆಯಲ್ಲಿ ಬಹುತೇಕರು ಎಸಿ ಬಳಸುವುದು ಸಾಮಾನ್ಯ. ಆದರೆ ಎಸಿಗಳಿಂದ ಹೊರಬರುವ ನೀರು ವ್ಯರ್ಥವಾಗುತ್ತಿದೆ. ಈ ನೀರನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಉದ್ಯಮಿ ಆನಂದ್ ಮಹಿಂದ್ರಾ ತಿಳಿಸಿದ್ದಾರೆ. ಎಸಿ ಘಟಕದಿಂದ ಹೊರ ಬರುವ ನೀರೆಲ್ಲ ಪೈಪ್ ನಲ್ಲಿ ತುಂಬುವ ವ್ಯವಸ್ಥೆ ಮಾಡಲಾಗಿದೆ. ಅದರ ಕೊನೆಯಲ್ಲಿ ಸಣ್ಣ ಟ್ಯಾಪ್ ಅನ್ನು ಸರಿಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ‘ಭಾರತದಲ್ಲಿ ಎಸಿ ಬಳಸುವ ಎಲ್ಲೆಡೆ ಇದೇ. ಆದ್ರೆ ಈ ರೀತಿಯ ವ್ಯವಸ್ಥೆ ಮಾಡಬೇಕು. ನೀರು ಅಮೂಲ್ಯವಾದುದು. ಇದನ್ನು ಎಚ್ಚರಿಕೆಯಿಂದ ಸಂಗ್ರಹಿಸಬೇಕು ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚುನಾವಣೆ ನಂತರ ಬಿವೈ ವಿಜಯೇಂದ್ರ ಪಟ್ಟ ಕಳ್ಕೋಳ್ತಾರೆ!
ಬಿ.ವೈ ವಿಜಯೇಂದ್ರ ಅವರು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ತಮ್ಮ ಬಿಜೆಪಿ ರಾಜ್ಯಾಧ್ಯಕ್ಷರ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ....
Discussion about this post